ಅದ್ರಗೂ ಈಗ ಕೆಲ್ಸ ಮಾಡುಕ್ ಅಂತೆಳಿ ಊರ್ ಬಿಟ್ಟ್ ಮುಂಬೈ ಸೇರ್ಕಂಡ್ ಮೇಲೆ ಯಾರೆ ಕುಂದಾಪ್ರದರ್ ಸಿಕ್ರೂ ಅವ್ರನ್ ಒಂದ್ಸಲ ಕುಂದಾಪ್ರ ಕನ್ನಡದಗೆ ಮಾತಾಡ್ಸ್ದಿದ್ರೆ ಸಮಾಧಾನವೇ ಆತಿಲ್ಲ.
ಕೆಲವ್ರೆಲ್ಲ ಇದ್ರ್ ಕಾಣಿ ಅವ್ರಿಗೆ ಕುಂದಾಪ್ರ ಕನ್ನಡದಗೆ ಮಾತಾಡುಕೆ ನಾಚ್ಕಿ ಆತ್ ಅಂಬ್ರ್. ಅಲ್ಲ ಈ ಬೇರೆ ಭಾಷಿಯರೆಲ್ಲ ಬಂದು ಅವ್ರವ್ರ ಭಾಷೆಯಗೆ ಮಾತಾಡುವತಿಗೆ ನಮ್ ಭಾಷಿ ಮಾತಾಡುಕೆ ನಮ್ಗೆ ಎಂತಕೆ ನಾಚ್ಕಿ ಆಯ್ಕ್ ನೀವೇ ಹೇಳಿ ಕಾಂಬ. ಅವ್ರಿಗೆಲ್ಲ ಆಗ ಇದೇ ಕುಂದಾಪ್ರ ಕನ್ನಡದಗೆ ಎಲಿಮೆಂಟ್ರಿ ಕಲ್ತದ್, ಇದೇ ಕುಂದಾಪ್ರ ಕನ್ನಡದಗೆ ಹೈಸ್ಕೂಲಗೆ ಪಾಠ ಕೇಂಡದ್ ಎಲ್ಲ ನೆನಪೇ ಹೋಯಿತ್ತಾ ಹಂಗಾರೆ? ಒಂದ್ನಾಕ್ ವರ್ಷ ಊರ್ ಬಿಟ್ರ್ ಕೂಡ್ಳೇ ಟುಸ್ ಪುಸ್ ಅಂದೇಳಿ ಇಂಗ್ಲೀಷ್ ಹಾರ್ಸುಕೆ ಕಲ್ತ್ ಕೂಡ್ಲೇ ಹುಟ್ಟಿನ ಲಾಗಾಯ್ತೂ ಆಡ್ಕಂಡ್ ಬಂದ ಭಾಷಿ ನೆನ್ಪ್ ಹೋತ್ ಅಂತಾರೆ ನಾಳಿಗ್ ಇವ್ರ್ ದೊಡ್ ಮನ್ಷ್ರು ಅನ್ಸ್ಕಂಬತಿಗೆ ಹೆತ್ ಅಪ್ಪ ಅಮ್ಮನ್ ನೆನ್ಪ್ ಆರು ಇರತ್ ಅಂದೇಳಿ ಏನ್ ಗ್ಯಾರಂಟಿ ಮಾರಾಯ್ರೆ…?
ಅದೆಲ್ಲ ಇರ್ಲಿ ಬಿಡಿ… ಇನ್ಮೇಲೆ ಪುರ್ಸೊತ್ತ್ ಸಿಕ್ದಾಗ್ಳಿಕೆಲ್ಲ ಕುಂದಾಪ್ರ ಕನ್ನಡದಗೆ ಎಂತಾರು ಒಂದಿಷ್ಟ್ ಬರುವ ಅಂದೇಳಿ ಮಾಡಿದ್ನೇ… ಓದಿ. ಲಾಯ್ಕ್ ಇದ್ರೆ ನಂಗೆ ಒಂದ್ಮಾತ್ ಹೇಳಿ…
ಒಂದ್ ಮಾತ್ ಮಾತ್ರ ನಾವೆಲ್ಲ ನೆನ್ಪಿಟ್ಕಣ್ಕಾದ್ ಅಂದ್ರೆ… ನೀವ್ ಯಾವ್ ಭಾಷಿ ಬೇಕಾರು ಕಲಿನಿ, ಎಲ್ಲಿಗ್ ಬೇಕಾರೂ ಹೋಯ್ನಿ ಆರೆ ನಮ್ ಭಾಷಿ, ಊರನ್ ಮಾತ್ರ ನೆನ್ಪ್ ಬಿಡ್ದಿದ್ರ್ ಸೈ.
ಹುಟ್ಟ್ರೆ ಕುಂದಾಪ್ರದಗೆ ಹುಟ್ಕ್
ಆಡ್ದ್ರೆ ಕುಂದಾಪ್ರ ಕನ್ನಡದಗೆ ಮಾತಾಡ್ಕ್,
ಬದ್ಕಿದ್ ಎತ್ತಿನ ಗಾಡಿ,
ಇದು ವಿಧಿ ಒಡ್ಸುವ ಗಾಡಿ….
ನನ್ ಮಾತ್ನ ನೀವ್ ಮರಿ ಬೇಡಿ…
ಕುಂದಾಪ್ರ ಕನ್ನಡವ ನೀವ್ ಮಾತಾಡಿ
ಸಂಗಹ : ಸುಧಾಕರ್ ಆಲೂರು
No comments:
Post a Comment